Google
 

Friday, March 9, 2007

Manase oh manase.. [Chandramukhi Pranasakhi]

ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಒಳ ಮನಸೇ
ಮನಸಿನಿನ್ನಲಿ ಯಾವ ಮನಸಿದೆ
ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆಏಏಏ
ಮನಸು ಕೊಟ್ಟು ಮನಸನ್ನೆ ಮರೆತು ಬಿಟ್ಟೆಯಾ
ಮನಸು ಕೊಟ್ಟು ಮನಸೊಳಗೆ ಕುಳಿತು ಬಿಟ್ಟೆಯಾ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ

ಓ ಮನಸೇ ಒಂದು ಮನಸು ಎರಡು ಮನಸು ಎಲ್ಲಾ ಮನಸ ನಿಯಮ
ಓ ಮನಸೆ ಎರಡು ಬಾಳು ಮನಸಲೊಂದೆ ಮನಸು ಇದ್ದರೆ ಪ್ರೇಮ
ಮನಸಾಗೊ ಪ್ರತಿ ಮನಸಿಗು ಮನಸೋತಿರುವ, ಎಳೆ ಮನಸು ಎಲ್ಲ ಮನಸಿನ ಮನಸೇರಲ್ಲ
ಕೆಲ ಮನಸು ನಿಜಮನಸಿನಾಲದ ಮನಸ ಹುಸಿ ಮನಸು ಅಂತ ಮನಸನ್ನು ಮನಸೆನ್ನೊಲ್ಲ
ಮನಸೆ ಮನಸೆ ಹಸಿ ಹಸಿ ಮನಸೆ ಮನಸು ಒಂದು ಮನಸಿರೋ ಮನಸಿನ ತನನನನ
ತಿರುಗೊ ಮನಸಿಗು ಮರಗೊ ಮನಸಿದೆ
ಮರದ ಮನಸಿಗು ಕರಗೊ ಮನಸಿದೆ
ಮೈ ಮನಸಲೆ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ
ಒಮ್ಮಲ ಮನಸಿದ್ದರು ಮುಳುಗೇಲದು ಮನಸು
ಮನಸೆಲ್ಲೊ ಮನಸು ಮಾಡೊ ಮನಸಾಮನಸು
ಮನಸೆ ಓ ಮನಸೆ

ಓ ಮನಸೆ ಮನಸು ಮನಸಲ್ಲಿದ್ದರೇನೆ ಅಲ್ಲಿ ಮನಶಾಂತಿ
ಓ ಮನಸೆ ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು
ಮನಸೂರಿ ಆಗೋದು ಮನಸಿಗು ಗೊತ್ತು
ಮನಸಿದ್ದರೆ ಮಾರ್ಗಾಂತ ಹೇಳುವ ಮನಸು
ಮನ್ನಿಸುವ ಮನದಲ್ಲಿ ಮನಸಿಡೋ ಹೊತ್ತು
ಮನಸೆ ಮನಸೆ ಬಿಸಿ ಬಿಸಿ ಮನಸೆ ಮನಸು ಒಂದು ಮನಸಿರೊ ಮನಸಿನ ಧಿರೆನನ
ತುಮುಲ ಮನಸಿಗು ಕೋಮಲ ಮನಸಿದೆ
ತೊದಲು ಮನಸಿಗು ಮೃದಲ ಮನಸಿದೆ
ಮನಸಿಚ್ಛೆ ಮನಸ ಒಳಗೆ ಮನಸ್ವೆಚ್ಛೆ ಮನಸ ಹೊರಗೆ
ಮನಸ್ಫೂರ್ತಿ ಮನಸ ಪೂರ್ತಿ ಇರುವುದೆ ಮನಸು
ಮನಸೆಲ್ಲೊ ಮನಸು ಮಾಡೊ ಮನಸಮನಸು

ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಒಳ ಮನಸೇ..

Nenapugala.. [Chandramukhi Pranasakhi]

ನೆನಪುಗಳ ಮಾತು ಮಧುರಾ
ಮೌನಗಳ ಹಾಡು ಮಧುರಾ

ನೆನಪುಗಳ ಮಾತು ಮಧುರಾ
ಮೌನಗಳ ಹಾಡು ಮಧುರಾ
ಕನಸೆ ಇರಲಿ ನನಸೆ ಇರಲಿ
ಪ್ರೀತಿ ಕೊಡುವ ಕನಸೆ ಮಧುರಾ

ನೆನಪುಗಳ ಮಾತು ಮಧುರಾ

ಸಾವಿರ ಹೂಗಳ ಹುಡುಕಿದರೆ
ಚಂದ ಬೆರೆ ಗಂಧ ಬೇರೆ ಸ್ಪರ್ಶ ಒಂದೇ
ಸಾವಿರ ಹೃದಯವ ಹುಡುಕಿದರು
ಅಳತೆ ಬೇರೆ ಸೆಳೆತ ಬೇರೆ ಪ್ರೀತಿ ಒಂದೇ

ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೊ ಪ್ರೀತಿ
ಗಾಳಿಯ ಗಂಧವ ಪಡೆದು ಅಂದವ ಹೆಣೆಯೊ ಪ್ರೀತಿ
ಶಂಕೆ ಇರದೇ ಗುಣಿಸೊ ಪ್ರೀತಿ
ನಿದ್ದೆ ನುಂಗಿ ಕುಣಿಸೊ ಪ್ರೀತಿ

ಶಬ್ದವಿರಲಿ! ಶಬ್ದವಿರಲಿ
ಪ್ರೀತಿ ಕೊಡುವ ಶಬ್ದ ಮಧುರ

ನೆನಪುಗಳ ಮಾತು ಮಧುರಾ

ಸಾವಿರಾ ಹಾಡನು ಹುಡುಕಿದರು
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೇ
ಸಾವಿರ ಪ್ರೇಮಿಯ ಹುಡುಕಿದರು
ತವಕ ಬೇರೆ ಪುಳಕ ಬೇರೆ ಪ್ರೀತಿ ಒಂದೇ

ನದಿಗಳ ಕಲರವಗಳಲಿ ಅಲೆಗಳು ತೋಯೊ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೊ ಪ್ರೀತಿ
ಚಿಲುಮೆಯಂತೆ ಚಿಮ್ಮೊ ಪ್ರೀತಿ
ಕುಲುಮೆಯೊಳಗೆ ಕಾಯ್ಸೊ ಪ್ರೀತಿ

ಸ್ವಾರ್ಥವಿರಲಿ! ನಿಸ್ವಾರ್ಥವಿರಲಿ
ಪ್ರೀತಿ ಕೊಡುವ ಸ್ವಾರ್ಥ ಮಧುರ

ನೆನಪುಗಳ ಮಾತು ಮಧುರಾ
ಮೌನಗಳ ಹಾಡು ಮಧುರಾ..

Kurak kukrallikere.. [Nenapirali]

ಅರೆ ಯಾರ್ರೀ ಹೆದರ್‍ಕೊಳ್ಳೋರು...ಬೆದರ್‍ಕೊಳ್ಳೋರು
ಪೇಚಾಡೋರು, ಪರ್‍‍ದಾಡವ್ರು, ಮರಗಳ್ ಮರೆನಲ್ಲಿ ಮಾತಾಡವ್ರು, ಮಾರ್ನಿಂಗ್ ಶೋನಲ್ಲಿ ಪಿಸ್ಗುಟ್ಟವ್ರು
ಮೈಸೂರ್ ಅಂತಾ ಜಿಲ್ಲೆಲಿದ್ದೂ
ಕಣ್ಣಿಗ್ ಬೇಕಾದ್ ನೋಟ ಇದ್ದೂ
ಹಳೆ ರಾಜ್ರ್ರು ಅಪ್ಣೆ ಇದ್ದೂ
ಪ್ರೀತಿ ಮಾಡೋಕ್ ಜಾಗ್ಗುಳ್ ಇದ್ದೂ
ಕದ್ದು ಮುಚ್ಚಿ ಓಡಾಡ್ತೀರಲ್ರೀ
ಬನ್ರೀ.. ನೋಡ್ರೀ... ನಾನ್ ಲವ್ ಮಾಡೊ ಸ್ಟೈಲ್ ಸ್ವಲ್ಪ ಕಲೀರೀ.....!

ಕೂರಕ್ಕ್ ಕುಕ್ಕ್ರಳ್ಳಿ ಕೆರೆ...ಬಾ ಬಾ
ತೇಲಕ್ ಕಾರಂಜಿ ಕೆರೆ...ಬಾ ಬಾ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಂ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.

ಬಲ್ಮುರಿಲಿ ಪೂಜೆ ನೆಪ
ಎಡ್ಮುರಿಲಿ ಜಪ ತಪ ||೨||
ಲವ್ವಿಗೆ ನಿರ್ವಿಘ್ನ ಲವ್ವಿಗೆ

ನಾರ್ತಿನಲ್ಲಿ ಶ್ರೀರಂಗ್‍ಪಟ್ಣ
ಸೌತಿನಲ್ಲಿ ನಂಜನ್‍ಗೂಡು ..ಪೂಜೆಗೇ....ಲವ್ ಪೂಜೆಗೇ
ಈ ಭಯಬಿಸಾಕೀ...ಲವ್ ಮಾಡಿ..ಲವ್ ಮಾಡಿ..ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರೀ ||೨|| ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ , ಮರಮರ ಮರದ ಮರೇಲೀ
ಅರ್‍ಮನೆಲಿ ಅಡ್ಡಾಡುತ ||೨|| ಮೂಡು ತಗೊಳ್ರೀ
ರಾಜನ್ ತರಾನೇ ಲವ್ವಲ್ ದರ್ಬಾರ್ ಮಾಡ್ಬಿಡ್ರೀ

ಹೇ ರಂಗಂತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕುತೊರೆಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು

ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೊವ್ರ್‍ಗೆ ಸರಿ ದಾರಿ ತೋರ್‍ತಾನೆ

ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ, ಬ್ಲಫ್ಫಿನಲ್ಲಿ ಬಫೆ ಮಾಡಿ
ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿ ಕೊಪ್ಪಲ್
ಲವ್ವಿಗೆ ಈ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಜಾತಿ ಬಿಟ್ರು ಸುಖ ಪಡ್ಬೇಕ್, ||೨|| ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೊ ||೨|| ಕಳ್ಳ ಲವಮ್ಮ
ಸತ್ಯ ಹೇಳಮ್ಮ, ನಿಜ್ವಾದ್ ಪ್ರೀತಿ ಮಾಡಮ್ಮಾ
ಜಾತಿ ಸುಡೋ ಮಂತ್ರ ಕಿಡಿ, ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ ಅಂಥ ಹೇಳಮ್ಮಾ
ತೀರ್ಥಹಳ್ಳಿ ಕುವೆಂಪು ಹುಟ್ಟಿದ್ರು
ವಿಶ್ವಪ್ರೇಮನಾ ಮೈಸೂರ್‍ಗೆ ತಂದ್ ಕೊಟ್ರು

ಮೈಸೂರೂ ಕೂಲಾಗಿದೆ, ಬೃಂದಾವನ ಗ್ರೀನಾಗಿದೆ ಲವ್ವಿಗೇ...ಸ್ವೀಟ್ ಲವ್ವಿಗೇ
ನರಸಿಂ‍ಸ್ವಾಮಿ ಪದ್ಯ ಇದೆ
ಅನಂತ್‍ಸ್ವಾಮಿ ವಾದ್ಯ ಇದೆ
ಸಾಂಗಿಗೆ ಲವ್ ಸಾಂಗಿಗೆ

ಈ ಭಯ ಬಿಸಾಕೀ ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಕೂರಕ್ಕ್ ಕುಕ್ಕ್ರಳ್ಳಿ ಕೆರೆ
ತೇಲಕ್ ಕಾರಂಜಿ ಕೆರೆ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಂ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ!!!!

Ajantha, ellora.. [Nenapirali]

ಅಜಂತ ಎಲ್ಲೋರ, ಚಿತ್ತಾರ ಶಿಲೆಯಲ್ಲೀ ||೨||
ಅದೆಲ್ಲಾ ನಾ ಕಂಡೆ ||೨||
ಈ ತಾಜ ತನುವಿನಲ್ಲಿ ||೨||

ಬೇಲೂರ ಬಾಲೇರ ಭಾರ ಕಂಬಗಳಲ್ಲೀ ||೨||
ಚೆಲುವಿನಾ ಭಾರಾನೋ? ||೨||
ಈ ತಾಜ ತನುವಿನಲ್ಲಿ; ಸೊಂಪಾದ ಪದಗಳಲ್ಲಿ.

ಮಂದಾವಾಗಿ ಬಳುಕುವಂತಾ ನಾರಿಯಿವಳ
ಅಂದ ನೋಡ ನಿಂತಾಗ, ಚಂದ ನೋಡ ನಿಂತಾಗ
ಯಾರೊ ನೀನು ಎಂದು ಕೇಳುತಾವೆ ಇವಳ ಪೊಗರಿನ ಹೃದಯ ಬಾಲಕಿಯರು
ನಾಟ್ಯದಂತೆ ನಡೆಯುವಾಗ ನಡೆಯುವಾಗ
ಅತ್ತಲಾಡಿ ಇತ್ತಲಾಡಿ ಇತ್ತಲಾಡಿ ಅತ್ತಲಾಡಿ
ಕೀಲು ಕೊಟ್ಟಾ ಕುದುರೆಯಂತಾಯಿತಲ್ಲ
ನನ್ನೀ ಸುಂದರಿ, ಸೊಂಟ ಪೀಠ ಸೊಂಟ ಪೀಠ
ಸೊಕ್ಕುಂಟು, ಸಿಗ್ಗುಂಟು ||೨||
ಈ ಸಜೀವ ಗೊಂಬೆಯಲ್ಲಿ..||೨||
ಅಂಕುಂಟು, ಡೊಂಕುಂಟು ||೨||
ಈ ತಾಜ ತನುವಿನಲ್ಲಿ
ಈ ನಾರಿ ನಡುವಿನಲ್ಲಿ.

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಿದಾಗ ಬೆದರುತಾಳೆ ಬೆದರುತಾಳೆ
ಬೆದರು ಬೊಂಬೆಯಾಗುತಾಳೆ
ಮಾತು ಬೇಡ; ಮುತ್ತು ನೀಡು, ಮುತ್ತು ನೀಡು ಎಂದರಿವಳು ಅದರುತಾಳೆ
ಅಂತಾ ತುಂಟಾ ಅನ್ನುತಾಳೆ

ತಬ್ಬಿಕೊಂಡ್ರೆ ಬಳ್ಳಿಯಂತೆ ಬಳ್ಳಿಯಂತೆ ಮೈಯನೆಲ್ಲಾ ಹಬ್ಬುತಾಳೆ
ಉಸಿರುಗಟ್ಟಿ ಉಬ್ಬುತಾಳೆ
ಉಸಿರಿನಲ್ಲೇ ಮಾತನಾಡಿ, ಮಾತನಾಡಿ,
ಹೃದಯ ತಂಪು ಮಾಡಿದಂತೆ
ತಣಿಯುತಾಳೆ, ಬಡಿಯುತಾಳೆ

ಎಲ್ಲಕ್ಕೂ ಆಶ್ಚರ್ಯ ಪಡುತಾಳೆ ಕ್ಷಣದಲ್ಲಿ||೨||
ಎಲ್ಲಕ್ಕೂ ಆಸ್ಚರ್ಯ ಪಡುತಾಳೆ ಕ್ಷಣದಲ್ಲಿ
ಆಶ್ಚರ್ಯ ತುಳುಕೈತೆ ||೨||
ಈ ತಾಜ ತನುವಿನಲ್ಲಿ
ಈ ಕಾರಂಜಿ ಕಣ್ಣಿನಲ್ಲಿ

ನಾನೊಂದು ಟೈಟಾನಿಕ್ ಬೋಟಾದೆ ಸುಖದಲ್ಲೀ ||೨||
ಹೊಡೆದೋದೆ..ಮುಳುಗೋದೆ..||೨||
ಈ ತಾಜ ತನುವಿನಲ್ಲಿ..
ಈ ಕನ್ಯಾ ಕಡಲಿನಲ್ಲಿ...

ಲಲ್ಲಾ ಲ...ಲಲ್ಲಾ ಲ....
ಲಲ್ಲಾಲ ಲಾ ಲಾ ಲಲ್ಲಾ....
ಲಾ ಲಾ ಲಾ ಲ ಲಾ

Nenapirali.. [Nenapirali]

ಹೇ...ಜೀವಗಳಾ ವನವೇ..ಭಾವಗಳಾ ವನವೇ
ನೀವಿರದೇ ನಾನಿಲ್ಲ, ನಾನಿರದೇ ನೀವಿಲ್ಲಾ
ಪ್ರೀತಿ ನನ್ನ ಹೆಸರು
ನೆನಪಿರಲಿ...ನೆನಪಿರಲಿ...
ನೆನಪಿರಲಿ...ನೆನಪಿರಲಿ...

ಒಲವು ಒಂಟಿಯಲ್ಲ, ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ
ಒಂಟಿ ಪ್ರೇಮಿಯಲ್ಲಾ
ಹೂವು ದುಂಬಿ ಹಾಡು ಅದು

ನೆನಪಿರಲಿ...ನೆನಪಿರಲಿ...
ನೆನಪಿರಲಿ...ನೆನಪಿರಲಿ...

ನಾನು ಯಾರು ಅಲ್ಲ, ನಾನು ಏನು ಅಲ್ಲ
ನಾನು ಇಲ್ಲದಿರೆ ಜಗದಲ್ಲಿ ಯಾರೂ ಅಲ್ಲ
ಏನೇನೂ ಇಲ್ಲ...
ಪ್ರೀತಿ ನನ್ನ ಹೆಸರು

ನೆನಪಿರಲಿ...ನೆನಪಿರಲಿ...
ನೆನಪಿರಲಿ...ನೆನಪಿರಲಿ...

ಪ್ರಾಯದ ಮೇಲೆ ದಿಬ್ಬಣ ಹೊರಟು, ಜೀವನವಾ ಸುತ್ತೀ
ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತೀ
ಓರೆಗಳನ್ನು ಕೋರೆಗಳನ್ನು ಮನ್ನಿಸಿ, ಮುದ್ದಿಸೀ
ಎಲ್ಲಾ ಸುಂದರವೆಂದು ನೋಡೋ ಒಳಗಣ್ಣೇ ಪ್ರೀತೀ
ನಿದಿರೆಯಾದರು ಅಲ್ಲ್ ಇಲ್ಲ್ ಇಲ್ಲ
ಪ್ರೀತಿ ಇಲ್ಲದ ಅಣುಕಣವಿಲ್ಲಾ...

ಪ್ರೀತಿಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡೂ ಅಲ್ಲ
ಬರೀ ಮುತ್ತೂ ಅಲ್ಲಾ..., ಕಾಣಿಸದ ಕಾವ್ಯ ಅದು

ನೆನಪಿರಲಿ...
Love is soul but not one ನೆನಪಿರಲಿ
Love is one but not alone ನೆನಪಿರಲಿ
Love is god but not a stone ನೆನಪಿರಲಿ

ಸುದ್ದಿಗೆ ಒಂದು ಸುದ್ದಿಯ ಕೊಟ್ಟು ಬುದ್ಧಿಯ ಚಿಗುರೊಡೆಸಿ
ಗೆಳೆತನವನ್ನು ಸಲಿಗೆ ಮಾಡೊ ಸಂಭ್ರಮವೇ ಪ್ರೀತಿ
ಒಳ್ಳೆಯ ಮಾತು ಒಳ್ಳೆಯ ಭಾವ ಹೃದಯ ಆವರಿಸಿ
ತನ್ನನು ಕಂಡು ಅರ್ಪಿಸಿಕೊಂಡೂಕೊಳ್ಳುವುದೇ ಪ್ರೀತಿ
ಪ್ರೀತಿಗೆ ಪಾತ್ರವೇ ನಮಗೇ ಕನ್ನಡಿ
ಒಪ್ಪಿಗೆ ಒಂದೇ ಪ್ರೀತಿಗೆ ಮುನ್ನುಡೀ...

ಪ್ರೀತಿಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡೂ ಅಲ್ಲ
ಬರೀ ಮುತ್ತೂ ಅಲ್ಲಾ..., ಕಾಣಿಸದ ಕಾವ್ಯ ಅದು

ನೆನಪಿರಲಿ...ನೆನಪಿರಲಿ...
ನೆನಪಿರಲಿ...ನೆನಪಿರಲಿ...

ನನಗೆ ಬಣ್ಣವಿಲ್ಲ
ಬಣ್ಣ ಬೀರಬಲ್ಲೆ
ನನಗೆ ರೂಪವಿಲ್ಲ, ಅಂದವಿಲ್ಲ

ಪ್ರೀತಿ ನನ್ನ ಹೆಸರು
ನೆನಪಿರಲಿ...
Love is soul but not one ನೆನಪಿರಲಿ
Love is one but not alone ನೆನಪಿರಲಿ
Love is god but not a stone ನೆನಪಿರಲಿ

Indu baanigella.. [Nenapirali]

ಯಾಹೂ ಯಾಹೂ!

ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕೂ ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಷ್ಪಕುಲಕೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ

ಯಾಹೂ ಯಾಹೂ!!

ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕೂ ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಷ್ಪಕುಲಕೂ ಹಬ್ಬ

ಈ ಈ ಈ ಈ
ಭುವನವೆಲ್ಲಾ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆ ಹನಿ
ಇಲ್ಲಿದೆ ಬಿಸಿಲಾ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ ||೨||
ಕಣ್‍ಗಳೆ ಗಾಜಿನ ಪರೆದೆಯು

ಇಂದು ಉಸಿರಿಗೂ ಹಬ್ಬ
ಉಬ್ಬುವೆದೆಗೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ

ಯಾಹೂ ಯಾಹೂ!!

ಇಂದು ಮರಳಿಗೆ ಹಬ್ಬ
ಉಪ್ಪು ಗಾಳಿಗೂ ಹಬ್ಬ
ಇಂದು ಕಡಲಿಗೆ ಹಬ್ಬ
ಅಪ್ಪೋ ಅಲೆಗೂ ಹಬ್ಬ

ಓ ಓ ಓ ಓ
ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ ನೆನಪಿಗೆ
ಋತುಗಳ ಜೂಟಾಟಕೆ

ಸೊಗಸಿನಿಂದಲೇ ಸೊಗಸ ಸವಿಯುವ ||೨||
ಸೊಗಸಿಗೆ ಚೆಲುವಿನ ಹೆಸರಿದೆ

ಇಂದು ಚೆಲುವಿಗೆ ಹಬ್ಬ
ಒಳ ಒಲವಿಗೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ

ಯಾಹೂ ಯಾಹೂ!!

ಆಹ ಹಾ ಹಾ ಹಬ್ಬ
ಮ್ ಮ್ ಮ್ ಮ್ ಹಬ್ಬ
ಹೆ ಹೆ ಹೆ ಹೆ ಹಬ್ಬ
ಲಲ್ಲ ಲಾಲಾ ಹಬ್ಬ

Manase maha.. [Nenapirali]

ದ್ರೌಪದಿ ... ದ್ರೌಪದಿ ... ಎಂದಿನದೇ ಕದನ
ಷಟ್ಪದಿ ... ಚೌಪದಿ ...ಯಾವುದರಲೀ ಈ ಕವನ ?

ಮನಸೇ ಮಹಾ ಮರ್ಕಟ
ಆಯ್ಕೆ ಮಹಾ ಸಂಕಟ
ಚಿತ್ತಾ ಮಹಾ ಚಂಚಲ
ಆಸೇ ತಿಮಿಂಗಿಲಾ

ಮಳೆಗೆ ಮನೆ ಮಣ್ಣಿನೊಳಗೆ
ಮಳೆ ಮನಸ್ಸೂ ಇದೆ ಗಾಳಿಯೊಳಗೆ

ಸುಖದ ಬಹುಮಾನ ಉಚಿತ ಕೊಡುವಂತ
ಪಂಚಭೂತಗಳ ಜರಿವುದೆಂತೋ
ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ

ಮನಸೇ ಮಹಾ ಮರ್ಕಟ
ಸನಿಹ ಮಹಾ ಪ್ರೇರಕ
ಚಿತ್ತಾ ಮಹಾ ಚಂಚಲ
ಮನ್ಮಥಾ ಸಮಯ ಸಾಧಕ

ಇಂದೂ ಗೆಲ್ಲೂ ಇಂದ್ರೀಯಗಳ
ಕೊಲ್ಲೂ ಅರಿಷಡ್ವರ್ಗಗಳ

ಎಳೆಯ ಬಿಸಿಲೊಳಗೆ
ಕುಣಿವ ತನು ಒಳಗೆ
ಕಹಿಯ ವಿಷಗಳಿಗೆ ತರುವುದೆಂತೋ

ಕಣ್ಣು ಮುಚ್ಚಿದರು ಕಾಣೊ ಸ್ವರ್ಗವನು
ಸವಿಯೊ ಹೆಣ್ಣೆದೆಯ ಜರಿವುದೆಂತೋ

ದ್ರೌಪದಿ ... ದ್ರೌಪದಿ ... ಎಂದಿನದೇ ಕದನ
ಷಟ್ಪದಿ ... ಚೌಪದಿ ...ಯಾವುದರಲೀ ಈ ಕವನ ?

ಬಯಕೆ ಬೆಂಕಿ ಬಲೆಯಾಗಿದೆ
ಭ್ರಮರ ನಿನ್ನ ನೋಡಬೇಕಿದೆ
ಹೂವು ಹಾರಲಾರದು
ಹಾಡಿ ಕೂಗಲಾರದು
ಅರಳದಿರಲಾರದು ಬೆರೆವುದೆಂತೋ
ಪ್ರಥಮ ಅನುಭವದ ಮಧುರ ನೆನಪುಗಳ
ಸುರಿದು ಹೋದವನ ಮರೆವುದೆಂತೋ

ಮನಸೇ ಮಹಾ ಮರ್ಕಟ
ವಿರಹ ಮಹಾ ದುಶ್ಚಟ
ಚಿತ್ತಾ ಮಹಾ ಚಂಚಲ
ತಿಳಿಯೋ ಹೆಣ್ಣ ಹಂಬಲ

ದ್ರೌಪದಿ ... ದ್ರೌಪದಿ ... ಎಂದಿನದೇ ಕದನ
ಷಟ್ಪದಿ ... ಚೌಪದಿ ...ಯಾವುದರಲೀ ಈ ಕವನ ?

Neene neene.. [Aakash]

ನೀನೆ ನೀನೆ ನನಗೆಲ್ಲಾ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬ ನಿನ್ನ ಪ್ರೀತಿ ತಾನೆ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ನೀನೆ ನೀನೆ ನನಗೆಲ್ಲಾ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬ ನಿನ್ನ ಪ್ರೀತಿ ತಾನೆ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ಮಳೆಯಲ್ಲು ನಾ ಬಿಸಿಲಲ್ಲೂ ನಾ ಚಳಿಯಲ್ಲೂ ನಾ ಜೊತೆ ನಡೆಯುವೆ
ಹಸಿವಲ್ಲೂ ನಾ ನೋವಲ್ಲು ನಾ ಸಾವಲ್ಲು ನಾ ಜೊತೆ ನಿಲ್ಲುವೆ
ನಾನಾ ದೇಶ ನಾನಾ ವೇಷ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡು ಎಂದು ಹಾಲು ಜೇನು

ನೀನೆ ನೀನೆ ನೀನೆ ನೀನೆ

ನೀನೆ ನೀನೆ ನನಗೆಲ್ಲಾ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬ ನಿನ್ನ ಪ್ರೀತಿ ತಾನೆ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ ನಿನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣಾ ಹೋಗಲಿ ನನಗೆ ನೀನೇ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು

ನೀನೆ ನೀನೆ ನೀನೆ ನೀನೆ

ನೀನೆ ನೀನೆ ನನಗೆಲ್ಲಾ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬ ನಿನ್ನ ಪ್ರೀತಿ ತಾನೆ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ನೀನೆ ನೀನೆ ಹೂ.. ಉ ಹೂ
ಮಾತು ನೀನೆ ಹೂ.. ಉ ಹೂ
ಲಾ ಲಾ ಲಾಲ ಹೂ.. ಉ ಹೂ
ಉ ಹೂ..ಉ ಹೂ..ಹೂಹೂ

Ahaa yentha.. [Aakash]

ಗಂಡು : ತಧರಿ ನಾ ತನ ಧೀಮ್ ತನ ತಧರಿ ನಾ ತನ ಧೀಮ್ ತನ
ಧೀಮ್ ತ ಧೀಮ್ ತ ದಿರಿ ನಾ ತಧರಿ ಧನಿ ಧೀಮ್ ತ ಧೀಮ್ ತ ದಿರಿ ನಾ
ಧೀಮ್ ತ ಧೀಮ್ ತ ದಿರಿ ನಾ ತಧರಿ ಧನಿ ಧೀಮ್ ತ ಧೀಮ್ ತ ದಿರಿ ನಾ

ಹೆಣ್ಣು : ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾತ್ತೋ ಯಾಕೆ ಅಂತ ಗೊತ್ತೆ ಆಗಲಿಲ್ಲ
ಈ ಪ್ರೀತೀಲಿ ಏನಿಂತ ಮಾಯ ಮಂತ್ರ ಒಂದು ತಿಳಿಯಲಿಲ್ಲ

ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ

ಹೆಣ್ಣು : ಕಣ್ಗಳ ಮಾತಿಗೆ ತುಟಿಗಳು ಮೌನವು
ಹೃದಯವು ಬೆರೆತರೆ ಕುಣಿದವು ಗೌಣವು
ನೆನ್ನಯವರೆಗೂ ನಾ ಹೇಗೋ ಇದ್ದೆ ನಾ ಬೇರೆ ನೀ ಬೇರೆ ಅಂತಿದ್ದೆ
ನೆಪ ಮಾತ್ರಕೆ ಎರಡು ದೇಹ ಇದೆ ಆದರೊಳಗಿರೋ ಪ್ರಾಣವು ಒಂದೇ
ಈ ಪ್ರಾಣನೇ ನಿನಗಾಗಿ ಮೀಸಲಿಡುವೆ ಬಾರೋ ನನ್ನ ಗೆಳೆಯ
ನಿನ್ನ ಪ್ರೀತೀಗೆ ಏಳೇಳು ಜನ್ಮದಲ್ಲೂ ಮುಡಿಪು ನನ್ನ ಹೃದಯ

ಹೆಣ್ಣು : ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ

ಹೆಣ್ಣು : ನದಿಗಳೂ ಓಡಿದೇ ಕಡಲನೂ ಸೇರಲು
ಚೈತ್ರವ ಕಾದಿದೆ ಹೂಗಳು ಅರಳಲು
ಸಂಗೀತ ಸಾಹಿತ್ಯ ಒಂದಾದಂತೆ ಹಾಲಲ್ಲಿ ಬೆರೆತಿರುವ ಜೇನಂತೆ
ಸೂಜಿಯ ಹಿಂದಿರುವ ದಾರದಂತೆ ನಾ ಬರುವೆ ಜೊತೆಯಾಗಿ ನೆರಳಂತೆ
ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ ಎಂದು ಹೇಗೆ ಇರಲಿ
ನಿನ್ನ ಪ್ರೀತಿನೇ ನನ್ನೆದೆಯ ಧಾಟಿಯಾಗಿ ಎಂದು ಬೆಳಗುತಿರಲಿ

ಹೆಣ್ಣು : ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾತ್ತೋ ಯಾಕೆ ಅಂತ ಗೊತ್ತೆ ಆಗಲಿಲ್ಲ
ಈ ಪ್ರೀತೀಲಿ ಏನಿಂತ ಮಾಯ ಮಂತ್ರ ಒಂದು ತಿಳಿಯಲಿಲ್ಲ

ಲಾ..ಲಲ..ಲಾಲ ಲಾಲಲ..
ಉ..ಹು..ಉ ಹೂ.

Nee amruthadhare.. [Amruthadhare]

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕೂ ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ
ಹೇ ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಹೇ ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ....

ನೆನಪಿದೆಯೆ ಮೊದಲಾ ನೋಟ
ನೆನಪಿದೆಯೆ ಮೊದಲಾ ಸ್ಪರ್ಶ
ನೆನಪಿದೆಯೆ ಮತ್ತನು ತಂದಾ ಆ ಮೊದಲ ಚುಂಬನಾ....
ನೆನಪಿದೆಯೆ ಮೊದಲಾ ಕನಸು
ನೆನಪಿದೆಯೆ ಮೊದಲಾ ಮುನಿಸು
ನೆನಪಿದೆಯೆ ಕಂಬನಿ ತುಂಬಿ..ನೀನಿತ್ತ ಸಾಂತ್ವನ...
ನೀನಿಲ್ಲದೆ ನಾ ಹೇಗೆ ಬಾಳಲೀ..................{ಪಲ್ಲವಿ}

ನೆನಪಿದೆಯೆ ಮೊದಲಾ ಸರಸ
ನೆನಪಿದೆಯೆ ಮೊದಲಾ ವಿರಸ
ನೆನಪಿದೆಯೆ ಮೊದಲು ತಂದಾ ಸಂಭ್ರಮದ ಕಾಣಿಕೆ
ನೆನಪಿದೆಯೆ ಮೊದಲಾ ಕವನ
ನೆನಪಿದೆಯೆ ಮೊದಲಾ ಪಯಣ
ನೆನಪಿದೆಯೆ ಮೊದಲಾ ಮಿಲನ..ಭರವಸೆಯ ಆಸರೆ
ನೀನಿಲ್ಲದೆ ನಾ ಹೇಗೆ ಬಾಳಲೀ................{ಪಲ್ಲವಿ}

Tunturu.. [Amruthavarshini]

ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೆ
ನನ್ನ ಎದೆಯಾಳೊ ಧಣಿ ನೀನೆ, ನಿನ್ನ ಸಹಚಾರಿಣಿ ನಾನೆ

Ee sundara.. [Amruthavarshini]

ಹಾ ... ಆ ಆ ...
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ

ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ - ಈ ಸುಂದರ

ದಿನ .. ದಿನ ....
ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ನಗೋ ತರ ಕಣ್ಣಂಚಲಿ ನಗಿಸಿರುವೆ
ಒಲವೇ ಆ ಆ ಆ ....
ಒಲವೇ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೇ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೆ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೊ ಮನಸು ನನದು - ಈ ಸುಂದರ

ಸಮ .. ಸಮ..
ಸ ರೀ ಗ ಮ ಸಮಾಗಮ, ಇಂಥ ವಿಸ್ಮಯ ಇದೇ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರೀ ತೊದಲು
ಉಸಿರೆ ..................................
ಉಸಿರೆ ನಿನ್ನ ಉಸಿರಾಗಿ ಈ ಉಸಿರಾ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೆ
ನಿನ್ನ ನೆರಳಿನ ಸನಿ ಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ - ಈ ಸುಂದರ (ಹ್ ...)

Balle balle.. [Amruthavarshini]

ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ

ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು

ತಂಪು ತಂಗಾಳಿಯು ತಂದಾನ ಹಾಡಿತ್ತು ಕೇಳೋಕೆ ನಾ ಹೋದರೆ
ನಿನ್ನ ಈ ಸರಿಗಮ ಕೇಳಿತು ಸಮ ಸಮ ಹಂಚಿತು
ಝುಳು ಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ
ನಿನ್ನದೇ ತಕಥೈ ಕಂಡಿತು ತಕದಿಮಿ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು
ಅಂದವ ಹೊಗಳಲು ಸಾಧ್ಯವೆ ನಿನ್ನ ಮುಂದೆ ಮೌನವೆ
ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೊ ಕಾವಲಿದೆ
ಎಲ್ಲ ಕಾವಲುಗಾತೀರ ಚೋರಿಯು ನೀನೆನ
ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ

Banalli odo.. [America america]

ಓ ಹೊ ಹೊ ಹೋ..
ಓ ಹೊ ಹೊ ಹೋ
ಲಾ ಲಾ ಲಾ ಲಾ...

||೨|| ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ ||೨||
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ

|| ಬಾನಲ್ಲಿ ಓಡೋ ಮೇಘಾ||

ಮುಗಿಲೊಂದು ಮನಸಿನ ಬಿಂಬಾ
ಮುತ್ತಿನಾ ಮಣಿಗಳೆ ತುಂಬಾ
ಎಲ್ಲೋ ದೂರದ ಚುಕ್ಕಿ
ಅದರತ್ತ ಗಿರಿಮುಗಿಲಾ ಹಕ್ಕಿ

|| ಬಾನಲ್ಲಿ ಓಡೋ ಮೇಘಾ||

ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲು

|| ಬಾನಲ್ಲಿ ಓಡೋ ಮೇಘಾ||

ಬಾನಲ್ಲೇ ಓಡಿದರೂ ಮೇಘಾ
ಮಳೆಗೂ ಮಣ್ಣಲೇ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದ ನಡುವೇ ಮಾತು

|| ಬಾನಲ್ಲಿ ಓಡೋ ಮೇಘಾ||

Nuru janmaku.. [America america]

ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ
ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ
ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ

ನೂರೂ ಜನ್ಮಕೂ...

Summane summane.. [Jothe jotheyali]

ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೇ..
ನಖರಾ ನಖರಾ ಶಾನೆ ನಖರಾ.. ನಂಗೂ ಇಷ್ಟಾನೆ..
ನಾನು ಸೀರೆ ನೆರಿಗೆ ಹಾಕುವ ಗಳಿಗೆ ಬರ್ತಾನೆ ಬಳಿಗೆ
ಆಮೇಲೆ ಅಮ್ಮಮ್ಮ..
ಯಾವ ಸೀಮೆ ಹುಡುಗ ತುಂಟಾಟ ಮಾಡದೆ
ನಿದ್ದೇನೆ ಬರದೆ.. ಅಬ್ಬಬ್ಬಬ್ಬಬ್ಬಬ್ಬ..
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೆ||

ಅಂಗಾಲಿಗೂ ಅಂಗೈಯಿಗೂ ಗೋರಂಟಿಯ ಹಾಕುವಾ..
ಯಾಮಾರಿಸೀ.. ಕೈಸೋಕಿಸೀ.. ಕಳ್ಳಾಟವಾ ಆಡುವಾ ಓ..ಒ
ನಿನ ಕಣ್ಣಲೀ ಧೂಳೂ ಇದೆ ಎಂದು ನೆಪಹೇಳುತಾ..
ನನ ಕಣ್ಣಲೀ ಕಣ್ಣಿಟ್ಟನೂ.. ತುಟಿಯಂಚನು ತಾಕುತಾ..
ನಾನು ನೋವು ಅಂದರೆ ಕಣ್ಣೀರು ಹಾಕುವಾ.. ನೋವೆಲ್ಲಾ ನೂಕುವಾ.. ಧೈರ್ಯಾನ ಹೇಳುವಾ..
ಮಾತು ಮಾತು ಸರಸ.. ಒಂಚೂರು ವಿರಸ..ಇಲ್ಲದ ವರಸ.. ಆಳ್ತಾನೆ ಮನಸ..
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೆ||

ಮುಂಜಾನೆಯಾ ಮೊಗ್ಗೆಲ್ಲವಾ.. ಸೂರ್ಯಾನೆ ಹೂ ಮಾಡುವಾ..
ಈ ಹುಡುಗಿಯಾ ಹೆಣ್ಣಾಗಿಸೋ.. ಜಾದುಗಾರಾ ಇವಾ.. ಓ.. ಒ
ಮುಸ್ಸಂಜೆಯಾ ದೀಪಾ ಇವಾ.. ಮನೆಮನ ಬೆಳಗುವಾ..
ಸದ್ದಿಲ್ಲದಾ ಗುಡುಗೂ ಇವಾ.. ನನ್ನೊಳಗೆ ಮಳೆಯಾಗುವಾ..
ಪ್ರೀತಿ ಅಂದ್ರೆ ನಂಬಿಕೆ.. ಎದೆಯಾನೆ ಕಾಣಿಕೆ.. ಅನ್ನೋದು ವಾಡಿಕೆ.. ಅದಕಿವನೆ ಹೋಲಿಕೆ..
ಏಳು ಏಳು ಜನುಮಾ.. ಇವನಿಂದಾನೆ ಅಮ್ಮಾ.. ಆಗುತ್ತ ಬಾಳಮ್ಮ.. ಅಂದೋನು ಆ ಬ್ರಹ್ಮಾ..
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೆ||

Friday, January 26, 2007

Araluthiru jeevada geleya.. [Mungaaru malle]

ಅರಳುತಿರು ಜೀವದ ಗೆಳೆಯ ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ ಪ್ರೇಮದಾ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹೊಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳೆಯ ನಂಟಿಗೆ ಹೆಸರು ಯಾಕೆ ಸುಮ್ಮನೆ

ಮಾತಿಗೆ ಮೀರಿದ ಭಾವದ ಸೆಳತವೇ ಸುಂದರ
ನಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆಯಾದರು ಚಂದಿರ ಬರುವನು ನಮ್ಮ ಜ್ಯೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೆ..

Mungaaru malleye.. [Mungaaru malle]

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾ ಜಡಿ ಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೊ

ಒಲವು ಎಲ್ಲಿ ಕುಡಿ ಒಡೆಯುವುದೊ ತಿಳಿಯದಾಗಿದೆ


ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮ ನಾದವೋ
ಎಳೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು ಏನು ಮೋಡಿಯೋ

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಹುಸಿರಲ್ಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರೋ

ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೇ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಳಯದೂರಿನಲ್ಲಿ ಕಳೆದು ಹೋಗೊ ಸುಖವ ಇಂದು
ಧನ್ಯನಾದೆ ಪಡೆದು ಕೊಂಡು ಹೊಸ ಜನ್ಮವೋ..

Anisuthide yako indu [ Mungaaru malle]

ಅನಿಸುತಿದೆ ಯಾಕೊ ಇಂದು ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಆಹಾ ಎಂತಾ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ

ಸುರಿಯುವ ಸೋನೆಯೂ ಸೂಸಿದೆ ನಿನ್ನದೆ ಪರಿಮಳ
ಇನ್ನ್ಯಾರ ಕನಸಲೂ ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕ್ಕೊ ಒಮ್ಮೆ ಹಾಗೇ ಸುಮ್ಮನೆ

ತುಟಿಗಲ ಹೂವಲಿ ಆಡದ ಮಾತಿನ ಸಿಹಿ ಇದೆ
ಮನಸಿನ ಪುಟದಲಿ ಕೇವಲ ನಿನ್ನದೆ ಸಹಿ ಇದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ ಹಾಗೇ ಸುಮ್ಮನೆ..